Sunday, June 16, 2013

poem on dad in kannada

ಅಪ್ಪ ಎಂದರೆ ಬಿಸಿ ತುಪ್ಪ
ಹೆದರಿಸಿ ಬೆದರಿಸುವ ಬೆಪ್ಪ
 ಎಂದು ಭಾವಿಸಿ ಬೇಸರಿಸಿ
ನನ್ನೂಳಗೆ ನನ್ನ ಅಪ್ಪನ ಶಪಿಸಿ
ಮನಸ್ಸಿನಲ್ಲೇ ನಿಂದಿಸುತ್ತಿದ್ದೆನು

ಅವತೋರಿದ ಬಾಳಿನ ದಾರಿ
ಅವಕಲಿಸಿದ ಬದುಕಿನ ಗುರಿ
ಜೀವನದ ಪಾಠದಿಂದ ಇಂದು
ಬದುಕಿನಲ್ಲಿ ಎತ್ತರದ ಬಿಂದು
ಏರಿದ್ದೇನೆ? ಅಭಿವಂದಿಸಲು ಅಪ್ಪನಿಲ್ಲ
ತುಪ್ಪ ತಣ್ನಗಾದಮೇಲೆ ಫಲವಿಲ್ಲ.

ಅಪ್ಪ ನನ್ನ ಬಧುಕಿನುದ್ದಕ್ಕೂ
ಮಣ್ನಲ್ಲಿ ಮಣ್ನಾಗುವಂತಕ್ಕೂ
ನಿನ್ನ ನೆನಪಿನ ಬುತ್ತಿ ಹೂರುತ್ತೇನೆ
ಅಪ್ಪನ್ನ ನಿಂದಿಸಬೇಡಿರೆಂಬ ನೀತಿ ಭಿತ್ತುತೇನೆ.

Saturday, June 15, 2013

ನನ್ನ ಕವಿತೆ

 ನನ್ನ ಕವಿತೆ  ನನ್ನ  ಹಾಗೆ
ಸೀದಾ ಸಾದಾ ನೇರ
ತುಸು ಖಾರಾ
ಅದರೆ ಇಳಿಸುತದೆ ಎದೆ ಭಾರ